ಅಭಿಪ್ರಾಯ / ಸಲಹೆಗಳು

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ

ಮೈಸೂರು ವೈದ್ಯಕೀಯ ಕಾಲೇಜನ್ನು ಜೂನ್/ಜಲೈ 1924 ರಲ್ಲಿ ಸ್ಥಾಪಿಸಲಾಯಿತು. ಇದು ಅತ್ಯಂತ ಹಳೆಯ ಮತ್ತು ಮೊದಲ ವೈದ್ಯಕೀಯ ಕಾಲೇಜು ಇದಾಗಿದ್ದು ಸಾಕಷ್ಟು ಪ್ರಗತಿ ಸಾಧಿಸಿದೆ. ಇದರ ಕಾರ್ಯ ಪ್ರವೃತ್ತಿಯ ನಿಮಿತ್ತ ಇದು ದೇಶದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ.

         "ಒಡೆಯರ್‌” ರಾಜವಂಶದ 22 ನೇ ಆಡಳಿತಗಾರ ಶ್ರೀ ಕೃಷ್ಣರಾಜ ಒಡೆಯರ್‌ 1833 ರಲ್ಲಿ ವೈಸೂರು ರಾಜಧಾನಿಯಲ್ಲಿ ವೈದ್ಯಕೀಯ ಶಾಲೆ (ವೈದ್ಯಶಾಲ) ಸ್ಥಾಪಿಸಲಾಯಿತು(1799-1868). ಮೈಸೂರು ಸಂಸ್ಥಾನದ ಆಡಳಿತಗಾರ ಸಾರ್ವಜನಿಕ ಹಿತದೃಷ್ಟಿಯಿಂದ ಇಂಗ್ಲೀಷ್‌ ಔಷಧದ ಚಿಕಿತ್ಸೆಗಾಗಿ 1922 ರಲ್ಲಿ ಪ್ರಕಟವಾದ ಅರಮನೆ ನಿಯಂತ್ರಕ ಬಿ.ಕೃಷ್ಣರಾವ್‌ ಅವರು ಬರೆದ ಮೈಸೂರು ರಾಯಲ್‌ ಫ್ಯಾಮಿಲಿ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.ಇವರು ಅರಮನೆ ದರ್ಬಾರ್ನಲ್ಲಿ ಕೆಲಸ ಮಾಡುತ್ತಿದ್ದರು. ನಂತರ ವೈದ್ಯಕೀಯ ಶಾಲೆಯ ಮೇಲ್ವಿಚಾರಕರಾಗಿ ನಾಮ
ನಿರ್ದೇಶನಗೊಂಡರು.          ಮೂರನೇ ಕೃಷ್ಣರಾಜ ಒಡೆಯರ್ರವರು ಕುಷ್ಟರೋಗಿಗಳಿಗೆ ಮಾನಸಿಕ ಕೇಂದ್ರಗಳನ್ನು ಮತ್ತು 1850 ರಲ್ಲಿ ಮಾನಸಿಕ ಅಸ್ವಸ್ಥ ರೋಗಿಗಳಿಗೆ ಪ್ರತ್ಯೇಕ ಕೇಂದ್ರಗಳನ್ನು ಸ್ಥಾಪಿಸಿದರು. ಮತ್ತಷ್ಟು ಮೂಲಗಳ ಪ್ರಕಾರ, ಬ್ರೀಟೀಷ್‌ ಸೂಚನೆಗಳನ್ನು ಕಬ್ಬನ್‌ ಸಾಹೇಬ್‌, ಶಿಕ್ಷಣ ಪ್ರತ್ಯೇಕ ಇಲಾಖೆ ಮೈಸೂರು ರೂಪಿಸಿರುವ  ಸಂಸ್ಥಾನ ಮೇ 1857 ರಂದು ಮೈಸೂರು ವೈದ್ಯಕೀಯ ಕಾಲೇಜನ್ನು ಮೊದಲು ಬೆಂಗಳೂರಿನಲ್ಲಿ ಪ್ರಸಿದ್ದ ವಿಕ್ಟೋರಿಯಾ ಆಸ್ಪತ್ರೆ ಬಳಿ, ಕೋಟೆ ಬಳಿಯ ಮೂಲ ಎಲೆಕ್ಟ್ರಿಕ್‌ ʼಎʼ ನಿಲ್ದಾಣದ ಸಣ್ಣ ಕಟ್ಟಡದಲ್ಲಿ ಪ್ರಾರಂಭಿಸಲಾಯಿತು. ಆದರೆ ಹೆಗ್ಗುರುತುಗಳು ಕಣ್ಮರೆಯಾಗಿವೆ. ಮೊದಲ ಪ್ರಾಂಶುಪಾಲರಾಗಿದ್ದ ಡಾ|| ಹೆಚ್.ಜಿ.ಮೈಲ್‌ವಗಾನಮ್‌ ಮತ್ತು ಡಾ|| ಬಿ.ಕೆ. ನಾರಾಯಣ ರಾಂ 1917 ರಿಂದ ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರಗೊಂಡಿತು. ಕ್ರಷ್ಣರಾಜ ಒಡೆಯರ್‌ರವರ ಈ ಸಾಹಸಕ್ಕಾಗಿ ಇಡೀ ವೈದ್ಯಕೀಯ ವೃತ್ತಿಯ ತೀವ್ರ ವಿರೋಧವಿತ್ತು. ಆದರೆ ಮಹಾರಾಜರ ಆಸೆ ಮೇಲುಗೈ ಸಾಧಿಸಿತು ಮತ್ತು ಈಡೇರಿತು. ಆದ್ದರಿಂದ ಈ ಕಾಲೇಜನ್ನು 2 ಬಾರಿ ಜನಿಸಿದವರು ಎಂದು ಪರಿಗಣಿಸಲಾಯಿತು, ಮೊದಲು ಬೆಂಗಳೂರಿನಲ್ಲಿ ನಂತರ ಮೈಸೂರಿನಲ್ಲಿ  ಯೂನಿವರ್ಸಿಟಿ ಮೆಡಿಕಲ್‌ ಕಾಲೇಜು (ಯು.ಎಂ.ಸಿ) ಎಂದು ನಾಮಕರಣ ಮಾಡಲಾಯಿತು. ಹಿಂದಿನ ಯುಗದ ಸ್ಥಳೀಯ ರಾಜಪ್ರಭುತ್ವದಲ್ಲಿ ಪ್ರಾರಂಭವಾದ ಮೊದಲ ವೈದ್ಯಕೀಯ ಕಾಲೇಜು ಎಂಬ ವಿಶಿಷ್ಟತೆಯನ್ನು ಇದು ಹೊಂದಿದೆ. ಇದು ಕರ್ನಾಟಕದ 1952 ರವರೆಗೆ ಇರುವ ಏಕೈಕ ವೈದ್ಯಕೀಯ ಕಾಳೇಜು ಇದಾಗಿತ್ತು. ಬಹುಶಃ ಅದು ಶ ಸಮಯದಲ್ಲಿ ಭಾರತದ 6 ನೇ ಅಥವಾ 7 ನೇ ವೈದ್ಯಕೀಯ ಕಾಲೇಜು ಆಗಿರಬಹುದು. ಆರಂಭದಲ್ಲಿ ಇದನ್ನು ತಾತ್ಕಾಲಿಕವಾಗಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಯ ಕಟ್ಟಡದಲ್ಲಿ ತನ್ನ ಕಛೇರಿ ಮತ್ತು ಉಪನ್ಯಾಸ ಸಭಾಂಗಣಗಳಿಗೆ ಸ್ಥಳಾವಕಾಶ ಕಲ್ಪಿಸಲಾಯಿತು.          ಡಾ|| ಜೆ.ಎಫ್.‌ ರಾಬಿಸನ್‌ , ಬ್ರೀಟೀಷರ್‌ ಮೈಸೂರಿನ ಕಾಲೇಜಿನ ಮೊದಲ ಪ್ರಾಂಶುಪಾಲರಾಗಿದ್ದರು. ಅವರು ಹಿಸ್‌ ಹೈ ನೆಸ್ಲೆ ದರ್ಬಾರ್ (ಅರಮನೆ) ಶಸ್ತ್ರ ಚಿಕಿತ್ಸಕರಾಗಿದ್ದರು ಮತ್ತು ಪ್ರತಿಷ್ಟಿತ ಕೃಷ್ಣರಾಜೇಂದ್ರ ಆಸ್ಪತ್ರೆಯ ಅಧೀಕ್ಷಕರಾಗಿದ್ದರು. ಅವರು ಯು.ಎಸ್.ಎ. ದ ಮಾಯೋ ಕ್ಲಿನಿಕ್‌ ನ ಸಹವರ್ತಿಯಾಗಿದ್ದರು ಹಾಗೂ ಅದರ ಎಫ್ಸಿ.ಎಸ್.‌ ಪಡೆದರು. ಬ್ರೀಟೀಷ್‌ ಫೆಲೋಶಿಪ್‌ (ಎಫ್.ಆರ್‌ .ಸಿ.ಎಸ್.‌ ಎಡಿನ್ಬರ್ಗ್)  ತೆಗೆದುಕೊಳ್ಳಲು ಯು.ಕೆ.ಗೆ ಅವರನ್ನು ನಿಯೋಜೆಸಲಾಯಿತು.

ಇತ್ತೀಚಿನ ನವೀಕರಣ​ : 09-02-2022 04:29 PM ಅನುಮೋದಕರು: superadmin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080